welcome

ಸರ್ಕಾರದ ಪತ್ರದ ಸಂ. ನ ಅ ಇ : 377 : ಮೈ ಅ ಪ್ರಾ : 2010, ದಿನಾಂಕ : 18-06-2010. ರ ಅನ್ವಯ ಶ್ರೀ ಬಿ. ಹೆಚ್. ಶ್ರೀಕಾಂತ್ ಪೈ ರವರು ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.


ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಸರ್ಕಾರದ ಆದೇಶ ಸಂಖ್ಯೆ. ಹೆಚ್ ಯುಡಿ : 181 : ಟಿಟಿಪಿ : 88 : ದಿನಾಂಕ: 15-04-1988 ರಿಂದ ಅಸ್ತಿತ್ವಕ್ಕೆ ಬಂದಿರುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದನಂತರ ಹಿರೇಮಗಳೂರು ಗ್ರಾಮದ ಸರ್ವೆ ನಂ. 318 ಮತ್ತಿತರೆ ಸರ್ವೆ ನಂಬರುಗಳಲ್ಲಿನ 135 ಎಕರೆ ಜಮೀನಿನಲ್ಲಿ ವಸತಿ ಬಡಾವಣೆಯನ್ನು ರೂಪಿಸಿದ್ದು ಸರ್ಕಾರದ ಆದೇಶ ಸಂ. ಹೆಚ್.ಯು.ಡಿ : 367 : ಎಮ್.ಐ.ಬಿ. : 89, ದಿನಾಂಕ: 27-05-1991 ರಲ್ಲಿ ಸರ್ಕಾರವು 7.41 ಕೋಟಿಗಳ ಗಾತ್ರದ ಯೋಜನೆಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ 18 (3) ರ ಅನ್ವಯ ಮಂಜೂರಾತಿ ನೀಡಿರುತ್ತದೆ